Monday, June 13, 2011

ತಲೆಹರಟೆ

ಮೂವತ್ತು ವರ್ಷದ ಮಗ ಅಡ್ಡ ದಾರಿ ಹಿಡಿದು ತಂದೆ ತಾಯಿಯ ನೆಮ್ಮದಿಗೆ ಬೆಂಕಿ ಇಟ್ಟಿದ್ದಾನೆ. ನಲ್ಲೀಲಿ ಕಾವೇರಿ ನೀರು ಬರತ್ತೋ ಇಲ್ಲವೋ ಗಿರಿಜಾ ಆಂಟಿ ಕಣ್ಣಲ್ಲಿ ಮಾತ್ರ ದಿನಬೆಳಗಾದರೆ ನೀರು. ಗುರುಬಲ ಇಲ್ಲ, ಶಾಂತಿ ಮಾಡಿಸಿದರೆ ದುಡಿಯಲು ಶುರು ಮಾಡಿ ಮಗ ಸರಿ ದಾರಿಗೆ ಬರುತ್ತಾನೆ ಅಂತ ನೆರೆಹೊರೆಯ ಹಿತೈಷಿಗಳ ಉವಾಚ. Latest ಗೋಳು ಹೇಳಿಕೊಳ್ಳಲು ಆಂಟಿ ನಮ್ಮ ಮನೆಗೆ ಬಂದಿದ್ದರು. ಶಾಂತಿಯ ಬಗ್ಗೆ ಕೂಡಾ ಹೇಳಿದರು. ನಾವು ಸಮಾಧಾನದ ಮಾತನ್ನು ಹೇಳಿ ಅವರನ್ನು ಕಳಿಸಿದೆವು.

ನಾನಿನ್ನೂ "ಅಯ್ಯೋ ಪಾಪ" ದ ಮೂಡ್ ನಲ್ಲೇ ಇರುವಾಗ ನನ್ನ ಪತಿಯ ತಲೆಹರಟೆ ಉವಾಚ: "ಮೂವತ್ತು ವರ್ಷಗಳ ಹಿಂದೆ ವಾಂತಿ ಮಾಡ್ಕೊಂಡ್ ಕರ್ಮಕ್ಕೆ ಈಗ ಶಾಂತಿ ಬೇರೆ ಕೇಳು!".


1 comment:

Spicy Sweet said...

ಪಾಪ.. ಆಂಟಿಗೆ ಶಾಂತಿ ಮಾಡಿಸೋದ್ರಿಂದ ಪರಿಹಾರ ಸಿಗೋತ್ತೆ ಅನ್ನೋ ಭ್ರಾಂತಿ !