ಜೂನ್ ೧೫, ೨೦೧೧, ರಾತ್ರಿ ೧೧.೫೫ ಕ್ಕೆ ಚಂದ್ರಗ್ರಹಣ scheduled ಆಗಿತ್ತು.
ಬೆಳ್ಳಂಬೆಳಗ್ಗೆ, ನಮ್ಮತ್ತೆ ಫೋನ್ ಮಾಡಿದ್ದರು. ರಾಯರ ಮಠದ ಪಂಚಾಂಗದ ಪ್ರಕಾರ, ಈ ಗ್ರಹಣದಿಂದ ಮಕರ ರಾಶಿಯವರಿಗೆ 'ಅಶುಭ-ಫಲ'ವಿದೆಯೆಂದೂ, ಕೆಲವು ಪದಾರ್ಥಗಳನ್ನು ದಾನ ಕೊಡಬೇಕೆಂದೂ, ದೇವರಲ್ಲಿ ಪ್ರಾರ್ಥನೆ ಮಾಡಬೇಕೆಂದೂ ನನಗೆ (ಮಕರಿಗೆ) ಹೇಳಿದರು.
ಸ್ವಲ್ಪ ಸಮಯದ ನಂತರ ಅಮ್ಮ ಖುಷಿ ಖುಷಿಯಾಗಿ ಫೋನ್ ಮಾಡಿದರು. ಉತ್ತರಾದಿ ಮಠದ ಪಂಚಾಂಗದ ಪ್ರಕಾರ ಈ ಗ್ರಹಣದಿಂದ ಮಕರ ರಾಶಿಯವರಿಗೆ 'ಶುಭ-ಫಲ' ವಿದೆಯೆಂದೂ ಉದ್ಯೋಗದಲ್ಲಿ ಬದಲಾವಣೆ, ಪ್ರಗತಿ, ಇತ್ಯಾದಿಗಳ ಸಂಭವನೀಯತೆಯಿದೆಯಂದೂ ಹೇಳಿದರು.
ಪಂಚಾಂಗದ terminologies ಪ್ರಕಾರ, ಗ್ರಹಣದ ಒಳ್ಳೆಯ ಪರಿಣಾಮವನ್ನು "ಶುಭ ಫಲ" ಎಂದೂ, ಕೆಟ್ಟ ಪರಿಣಾಮವನ್ನು "ಅಶುಭ ಫಲ" ಎಂದೂ, ಕೆಟ್ಟ ಮತ್ತು ಒಳ್ಳೆಯ ಪ್ರಭಾವಗಳು ಮಿಶ್ರಿತವಾಗಿದ್ದರೆ ಅದನ್ನು "ಮಿಶ್ರ ಫಲ" ಎಂದೂ ಕರೆಯುತ್ತಾರೆ.
ಆದರೆ ವಿವಿಧ ರೀತಿಯ ಪಂಚಾಂಗಗಳು ಮಕರಕ್ಕೆ ಮಾಡಿದ ಹಾಗೆ conflict ಉಂಟು ಮಾಡಿದರೆ ಅದನ್ನು "ಚೌ ಚೌ ಫಲ" ಎಂದು ಕರೆಯಬೇಕು ಎಂದು ನಾನು ನಿರ್ಧರಿಸಿದ್ದೇನೆ!
2 comments:
ಹೀಗಿದ್ದರೆ ಪಂಚಾಂಗ ನೋಡಿ ತಿಳಿದುಕೊಳ್ಳೋದು ಏನಿದೆ? ಒಮ್ಮೆ ಖುಷಿ ಇದ್ದಾರೆ ಇನ್ನೊಮ್ಮೆ ದುಃಖ ಇರುತ್ತದೆ.. ಪಂಚಾಂಗಗಳು PUN ಮಾಡಲು ಹೋಯಿತೋ ಏನೋ.. ಇದರ ಮಧ್ಯೆ (ಅ)ಶುಭ .. ಅವರವರ ಭಾವಕ್ಕೆ ಅವರವರ ಭಕುತಿಗೆ ಅನ್ನುವ ಹಾಗೆ ಅರ್ಥ ಮಾಡ್ಕೊಬೇಕು ಅಷ್ಟೇ..
ನಿಜ, ಇವು 'pun ಚಾಂಗಾನೋ' ಅಥವಾ 'fun ಚಾಂಗಾನೋ' ಅಂತ ನನಗೂ ಅನ್ನಿಸಿತು.
Post a Comment